Joomla 3.1 Templates by Bimba Coupon

Our Vision

Providing basic medical care to the deserved...More..

Medical care

We offer Medical care with love and Compassion.. More...

CSR Partners

Our CSR partners are... More...

News and Media

ಬಡವರ ಭಾಗ್ಯದ ಭಾಗಿಲು

ಜೈಭಾರತ್ ನಗರದಲ್ಲಿರುವ ಶ್ರೀ ಚಂದನ್ ಮಲ್ ಬೋತ್ರಾ ಚಾರಿಟಬಲ್ ಮೆಡಿಕಲ್ ಸೆಂಟರ್ ಕಳೆದ ಹತ್ತು ವ‍ರ್ಷಗಳಿಂದ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ.

 ೧೯೯೯ ಜುಲೈ ೧೪ರಂದು ಪ್ರಾರಂಭಗೊಂಡ ಈ ಆಸ್ಪತ್ರೆಯಲ್ಲಿ ಇದುವರೆಗೂ ಸಾವಿರಕ್ಕೂ ಅಧಿಕ ಜನರು ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಕಣ್ನಿನ ಕ್ಯಾಂಪ್ ಆಯೋಜಿಸಿ ಅವಶ್ಯಕತೆ ಇರುವವರಿಗೆ ಉಚಿತ ಶಸ್ತ್ರಚಿಕಿತ್ಸೆ ಹಾಗೂ ವೈದ್ಯಕೀಯ ನೆರವು ನೀಡುವುದು ಈ ಅಸ್ಪತ್ರೆಯ ಅಗ್ಗಳಿಕೆ. ಕಾಲಕಾಲಕ್ಕೆ ಶಿಬಿರಗಳನ್ನು ಆಯೋಜಿಸುವುದರ ಜತೆಗೆ ಪ್ರತಿ ಶನಿವಾರ ಕಣ್ಣಿನ ತಪಾಸಣೆ ಶಿಬಿರ, ಹದಿನೈದು ದಿನಕ್ಕೊಮ್ಮೆ  ಇ.ಎನ್. ಟಿ ಮತ್ತು ಡಯಾಬಿಟಿಸ್ ಚಿಕಿತ್ಸೆ ಶಿಬಿರ, ತಿಂಗಳಿಗೊಮ್ಮೆ  ಆರ್ಥೊಪಿಡಿಕ್, ಕಾರ್ಡಿಯಲಜಿ ಚಿಕಿತ್ಸಶಿಬಿರಗಳನ್ನು ಏರ್ಪಡಿಸುತ್ತಿದೆ. ಕಣ್ಣಿನ ಶಿಬಿರಕ್ಕೆ ಹೊಸಕೋಟೆ ಮುಖ್ಯರಸ್ತೆಯಲ್ಲಿರುವ 'ಗ್ಲೋಬ್ ಐ' ಪೌಂಡೆಶನ್ ಕೈಜೊಡಿಸುತ್ತಿದೆ. ನಮ್ಮ ಆಸ್ಪತ್ರೆಗೆ ೨೦ ಸಾವಿರ ರೋಗಿಗಳು ನೋಂದಾಯಿಸಿಕೊಂಡಿದ್ದಾರೆ. ಇಲ್ಲಿಗೆ ಮೊದಲ ಸರಿ ಬರುವವರಿಂದ ನಾವು ಹತ್ತು ರೂಪಾಯಿ ತೆಗೆದುಕೊಂಡು ನೊಂದಣಿ ಮಾಡಿಕೊಳ್ಳುತ್ತೇವೆ. ನಂತರ ಅವರ ಹೆಸರಿನಲ್ಲಿ ಒಂದು ಮೆಡಿಕಲ್ ಫೈಲ್ ತೆರೆದು ಅವರಿಗೆ ಒಂದು ಗುರುತಿನ ಚೀಟಿ ನೀಡುತ್ತೇವೆ.

 

ಮುಂದೆ ಅವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ, ಕಣ್ಣಿನ ತಪಾಸಣೆ, ಶಸ್ಟ್ರ ಚಿಕೆತ್ಸೆ ಜತೆಗೆ ನೆಗಡಿ, ಕೆಮ್ಮು, ಜ್ವರ, ಹೃದಯ ಸಂಬಂಧಿ ಕಾಯಿಲೆ, ಡಯಾಬಿಟಿಸ್, ಹೈಪರ್ ಟೆನ್ಶನ್, ಕಿವಿ, ಮೂಗು, ಗಂಟಲು ಮೊದಲಾದ ತೊಂದರೆಗಳಿಗೂ ಇಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಆಸ್ಪತ್ರೆಯ ಬಗ್ಗೆ ವಿವರ ನೀಡುತ್ತಾರೆ ಡಾಕ್ಟರ್ ವೀಣಾ. ಜಿ.

 

ನಮ್ಮಲ್ಲಿಗೆ ಬರುವ ರೋಗಿಗಳಲ್ಲಿ ಅನೇಕರು ಬಡತನ ರೇಖೆಗಿಂತ ಕೆಳಗಿರುವವರು. ಹೆಚ್ಚಿನವರು ವೃದ್ಧರು.  ಇವರೆಲ್ಲರೂ ಬಾಣಸವಡಿ, ಬಿ.ಎಂ.ಹಳ್ಳಿ, ಜೈಭಾರತ್ ನಗರ ಹಾಗೂ ಸುತ್ತಮುತ್ತಲಿನ ಸ್ಲಮ್ ಗಳಲ್ಲಿ ವಾಸಿಸುವವರು  ನಮ್ಮ ಆಸ್ಪತ್ರೆ ಪ್ರಾಥಮಿಕ ಕೇಂದ್ರವಾದ್ದರಿಂದ ಇಲ್ಲಿಗೆ ಬರುವ ರೋಗಿಗಳಿಗೆ ಅದಕ್ಕಿಂತ ಹೆಚ್ಚಿನ ಚಿಕಿತ್ಸೆ ಬೇಕಿದ್ದರೆ ಅವರನ್ನು ದೊಡ್ಡ ಆಸ್ಪತ್ರೆಗೆ ಕಳುಹಿಸಿಕೊಡುತ್ತೇವೆ ಎಂದು ಮಾತು ಸೇರಿಸುತ್ತಾರೆ ಅವರು.


ಅಂದ ಹಾಗೆ, ಕಳೆದ ಆರು ತಿಂಗಳಿಂದೀಚೆಗೆ ಈ ಆಸ್ಪತ್ರೆಯಲ್ಲಿ ಆಯುರ್ವೇದಿಕ್ ವಿಂಗ್ ತೆಗೆಯಲಾಗಿದೆ.  ಇಲ್ಲಿ ಕಿಡ್ನಿ ಸಮಸ್ಯೆ ಹಾಗೂ ಚರ್ಮ ಸಮಸ್ಯೆಗಳಿಂದ ಬಳಲುತ್ತಿರುವವರಿಗಾಗಿ ಗೋಮೂತ್ರದಿಂದ ಸಂಸ್ಕರಿಸಿ ತಯಾರಿಸಿದ ಮಾತ್ರೆ, ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ.  ಉಚಿತ ಆಸ್ಪತ್ರೆಯ ಜೀವಾಳ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸಿ.ಪಿ.ಬೊತ್ರಾ

ಸ್ಥಳ : ನಂ.22, 7ನೇ ಕ್ರಾಸ್, ಜೈಭಾರತ್ ನಗರ, ಮಾರುತಿ . ಸೇವಾ ನಗರ ಹತ್ತಿರ, ಬಾಣಸವಾಡಿ ಮುಖ್ಯ ರಸ್ತೆ, ಫೋನ್ : 25468872

ಅರಿವೇ ಮದ್ದು

'ಸಂಕಟ ಬಂದಾಗ ವೆಂಕಟರಮಣ' ಅನ್ನುವಂತೆ ನಮ್ಮ ಜನರು ಕಾಯಿಲೆ ಬಂದಾಗ ಮಾತ್ರ ವೈದ್ಯರನ್ನು ನೆನೆಯುತ್ತಾರೆ.  ಕಾಯಿಲೆ ಬರದಂತೆ ಮೊದಲೇ ಎಚ್ಚರಿಕೆ ವಹಿಸುವುದಿಲ್ಲ.  ಪ್ರತಿಯೊಬ್ಬರೂ ತಾವು ಚೆನ್ನಾಗಿದ್ದೇವೆ ಎಂಬ ಭ್ರಮೆಯಲ್ಲಿಯೇ ಇರುತ್ತಾರೆ.  ಇದು ಜನರಲ್ಲಿನ ಜಾಗೃತಿಯ ಕೊರತೆಯನ್ನು ಬಿಂಬಿಸುತ್ತದೆ ಎನ್ನುತ್ತಾರೆ ಟ್ರಿನಿಟಿ ಆಸ್ಪತ್ರೆಯ ವೈದ್ಯ ಬಿ.ಜಿ.ಮುರುಳೀಧರ್.

ಬೆಂಗಳೂರು ಸೇರಿದಂತೆ ಬಳ್ಳಾರಿ, ರಾಯಚೂರು, ಗುಲ್ಬರ್ಗ ಮೊದಲಾದೆಡೆ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸಾ ಶಿಬಿರ ಆಯೋಜಿಸಿರುವ ಮುರುಳೀಧರ್ ಹೋದಲ್ಲೆಲ್ಲಾ ಕಂಡುಕೊಂಡ ಸತ್ಯವಿದು.  ಹೈ ಕೋರ್ಟ್, ಪೊಲೀಸ್ ಕಮಿಷನರ್ ಕಚೇರಿ, ಕೊಳಗೆರಿ ಮೊದಲಾದಡೆ ಕ್ಯಾಂಪ್ ಗಳನ್ನು ಉಚಿತವಾಗಿ ನಡೆಸಿದ್ದಾರೆ.  ವಿದ್ಯಾವಂತರಲ್ಲೂ ಆರೋಗ್ಯದ ಅರಿವಿನ ಕೊರತೆ ಇರುವುದು ಇವರಿಗೆ ಅಚ್ಚರಿ ತಂದಿದೆಯಂತೆ.

ಬೆಂಗಳೂರಿನಲ್ಲಿ ವಾಸಿಸುವ ಸುಮಾರು 25 ಲಕ್ಷ ಜನರಿಗೆ ಡಯಾಬಿಟೀಸ್ ಮತ್ತು ರಕ್ತದೊತ್ತಡ ಏರುಪೇರಾಗುವ ಸಮಸ್ಯೆ ಇದೆ. ಆದರೆ ಇದರ ಬಗ್ಗೆ ಅವರಿಗೆ ಅರಿವಿಲ್ಲ. ಅರಿವಿನ ಕೊರತೆಯಿಂದಾಗಿಯೇ ಶೇ 80 ಜನ ಹೃದಯಾಘಾತ, ಕಿಡ್ನಿ ವೈಪಲ್ಯ ಅಥವಾ ಪಾರ್ಶ್ವವಾಯುವಿಗೆ ತುತ್ತಾಗುತ್ತಾರೆ. ರೋಗ ಉಲ್ಬಣಗೊಂಡು ಸಾಯುವುದಕ್ಕಿಂತ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎನ್ನುತ್ತಾರೆ ಅವರು.

 

ಟ್ರನಿಟಿ ಆಸ್ಪತ್ರೆಯವರು ಆಯೋಜಿಸುವ ಶಿಬಿರದಲ್ಲಿ ರಕ್ತದೊತ್ತಡ, ಇ.ಸಿ.ಜಿ. ಎಕೊ-ಕಾರ್ಡಿಯೊಗ್ರಾಂ ಮೊದಲಾದ ಪರೀಕ್ಷೆಗಳನ್ನು ಉಚಿತವಾಗಿ ಮಾಡುತ್ತಾರೆ. ಬಡವರಿಗೆ ಉಚಿತವಾಗಿ ಔಷದಗಳನ್ನು ನೀಡುತ್ತಾರೆ. ಹೆಚ್ಚಿನ ವೈದ್ಯಕೀಯ ನೆರವು ಅವಶ್ಯವಿರುವ ರೋಗಿಗಳಿಗೆ ಅವರ ಆಸ್ಪತ್ರೆಯಲ್ಲಿ  ವೈದ್ಯಕೀಯ ವೆಚ್ಚದ ಮೇಲೆ ಶೇ 30 ರಿಂದ  50 ರವರೆಗೆ ರಿಯಾಯಿತಿಯನ್ನು ನೀಡುತ್ತಾರೆ. ಅಂದಹಾಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಡಾ. ಮುರುಳೀಧರ್ ಆಕಾಶವಾಣಿ, ದೂರದ‍ರ್ಶನ, ಇತರೆಡೆ ಉಪನ್ಯಾಸ ನೀಡುತ್ತಿದ್ದಾರೆ.

 

ಸ್ಥಳ: ಟ್ರನಿಟಿ ಆಸ್ಪತ್ರೆ ಮತ್ತು ಹೃದ್ರೋಗ ಪ್ರತಿಷ್ಠಾನ, ಬಸವನಗುಡಿ. ಆರ್. ವಿ. ರಸ್ತೆ, ದೂರವಾಣಿ : ೪೧೫೦೩೪೩೪. 41503434

 

ವೃದ್ಧರ ಪಾಲಿನ ಹೊಂಬೆಳಕು

ಮೆಗ್ರಾತ್ ರಸ್ತೆಯಲ್ಲಿರುವ ಹಾಸ್ಮಟ್ ಆಸ್ಪತ್ರೆ ಕೂಡ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದೆ. ಆರ್ಥೋಪಿಡಿಕ್, ಬೆನ್ನುಮೂಳೆ ಮತ್ತು ನರಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ವೃದ್ಧರಿಗೆ ಉಚಿತ ತಪಾಸಣಾ ಶಿಬಿರ ಆಯೋಜಿಸುತ್ತಿದೆ.

 

ಮಹಿಳಾ ದಿನ, ವೈದ್ಯರ ದಿನ, ಕಾರ್ಮಿಕ ದಿನ, ಅಪ್ಪಂದಿರ ದಿನ ಹೀಗೆ ವಿಶೇಷ ದಿನಗಳ ಜತೆಗೆ ಸಾಮಾನ್ಯ ದಿನಗಳಲ್ಲೂ ಶಿಬಿರ ನಡೆಸುತ್ತದೆ. ಅಲ್ಲಿ ಪ್ರಾಥಮಿಕ ತಪಾಸಣೆಯನ್ನು ಸಂಪೂರ್ಣ ಉಚಿತವಾಗಿ ನೀಡುತ್ತಾರೆ. ನಮ್ಮ ಆಸ್ಪತ್ರೆ ವತಿಯಿಂದ ಹಿರಿಯ ನಾಗರಿಕರು ಮತ್ತು ಮಹಿಳೆಯರಿಗಾಗಿ ಅನೇಕ ಶಿಬಿರಗಳನ್ನು

ಆಯೋಜಿಸುತ್ತಿದೆ. ಇಲ್ಲಿ ತಪಾಸಣೆಯನ್ನು ಉಚಿತವಾಗಿ ನಡೆಸಲಾಗುತ್ತದೆ.

 

ಹಾಗೆಯೇ, ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರಿಗೆ ನಮ್ಮ ಆಸ್ಪತ್ರೆಯಲ್ಲಿ ವೈದ್ಯಕೀಯ ವೆಚ್ಚದ ಮೇಲೆ ರಿಯಾಯಿತಿ ನೀಡುತ್ತೇವೆ. ಎನ್ನುತ್ತಾರೆ ಡಾಕ್ಟರ್ ಅಜಿತ್. ಸ್ಥಳ: ನಂ. 45, ಮೆಗ್ರಾತ್ ರಸ್ತೆ. ದೂರವಾಣಿ:  25593796

 

 

 

 

Contact us

Sri Chandanmal Pukhraj Bothra Trust

No 14, 4Th Cross, Jai Barath Nagar,
Banaswadi Road,
Bangalore – 560 033,
Karnataka, India.

 

Tel ++ 91 080 25468872

Email This email address is being protected from spambots. You need JavaScript enabled to view it.
or This email address is being protected from spambots. You need JavaScript enabled to view it.

www.cpbtrust.org